Friday, July 23, 2010

ನಾವು ಕನ್ನಮಂಗಲ ಶಾಲೆಯ ಶಿಕ್ಷಕರು ಕಳೆದ ಸಾಲಿನಲ್ಲಿ ಹಮ್ಮಿಕೊಂಡಿದ್ದ ವಿವಿದ ಚಟುವಟಿಕೆಗಳನ್ನು ಆಧರಿಸಿ ಒಂದು ಪುಸ್ತಕವನ್ನು ಮಾಡಿದ್ದೇವೆ. ಅದಕ್ಕೆ " ಜ್ಞಾಪಕ ಶಾಲೆ " ಎಂದು ಹೆಸರು ಕೊಟ್ಟಿದ್ದೇವೆ. ಅದರಲ್ಲಿ ನಮ್ಮ ಶಾಲೆಯಲ್ಲಿ ಸಂಘಟಿಸಿದ ಎಲ್ಲ ಸೃಜನಾತ್ಮಕ ಪ್ರಯೋಗಗಳನ್ನು ದಾಖಲಿಸಿದ್ದೀವೆ ಈ ಇಪ್ಪತ್ತು ಪುಟಗಳ ಪುಸ್ತಕದಲ್ಲಿ ವರ್ಣರಂಜಿತವಾಗಿ ಫೋಟೋಗಳೊಂದಿಗೆ ವಿವರಣೆಗಳನ್ನೂ ಕೂಡ ನೀಡಿದ್ದೇವೆ.